ಧುರಂಧರ್ 2 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹102 ಕೋಟಿ ಧಮಾಕಾ!

Share

ಧುರಂಧರ್ 2 ಸಿನಿಮಾ ಬಿಡುಗಡೆಯ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿದೆ. ರಣವೀರ್ ಸಿಂಗ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ, ಓಪನಿಂಗ್ ಡೇಯಲ್ಲೇ ಸುಮಾರು ₹102.55 ಕೋಟಿ ಕಲೆಕ್ಷನ್ ಗಳಿಸಿ 2026ರ ಅತ್ಯಂತ ದೊಡ್ಡ ಓಪನಿಂಗ್ ದಾಖಲೆ ನಿರ್ಮಿಸಿದೆ.

ಚಿತ್ರ ಬಿಡುಗಡೆಯ ಮುನ್ನವೇ ಅಭಿಮಾನಿಗಳಲ್ಲಿ ಭಾರೀ ಹೈಪ್ ಇದ್ದುದರಿಂದ, ದೇಶದಾದ್ಯಂತ ಥಿಯೇಟರ್‌ಗಳಲ್ಲಿ ಭರ್ಜರಿ ರೆಸ್ಪಾನ್ಸ್ ಕಂಡುಬಂದಿದೆ. ಈ ಮೂಲಕ ಹಲವು ದೊಡ್ಡ ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಈ ಸಿನಿಮಾ ಹಿಂದಿಕ್ಕಿದೆ.

ಪ್ರೀವ್ಯೂ ಶೋಗಳಿಂದಲೇ ಭರ್ಜರಿ ಆರಂಭ

ಚಿತ್ರದ ಪೇಡ್ ಪ್ರೀವ್ಯೂ ಶೋಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಮಾರ್ಚ್ 18ರಂದು ನಡೆದ ಪ್ರೀವ್ಯೂ ಪ್ರದರ್ಶನಗಳಿಂದಲೇ ಸುಮಾರು ₹43 ಕೋಟಿ ಆದಾಯ ಬಂದಿದೆ. ದೇಶದಾದ್ಯಂತ 21,000ಕ್ಕೂ ಹೆಚ್ಚು ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಟಿಕೆಟ್ ದರ ಹೆಚ್ಚಿದ್ದರೂ ಕಡಿಮೆಯಾಗದ ಕ್ರೇಜ್

ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾಗೆ ಕೆಲವು ನಗರಗಳಲ್ಲಿ ಟಿಕೆಟ್ ದರ ₹3000ರವರೆಗೂ ಏರಿದರೂ, ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ಭಾರೀ ಅಡ್ವಾನ್ಸ್ ಬುಕ್ಕಿಂಗ್ ಮತ್ತು ಫ್ಯಾನ್ಸ್ ಕ್ರೇಜ್ ಕಾರಣದಿಂದ ಮೊದಲ ದಿನವೇ ದಾಖಲೆ ಮಟ್ಟದ ಕಲೆಕ್ಷನ್ ಸಾಧ್ಯವಾಗಿದೆ.

ಮಂಗಳೂರು ₹200, ₹300 ಮತ್ತು ₹400 ಟಿಕೆಟ್ ದರಗಳಲ್ಲಿಯೇ ಭರ್ಜರಿ ಬುಕ್ಕಿಂಗ್ ಕಂಡುಬರುತ್ತಿದೆ. ಎಲ್ಲಾ ಶೋಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.ಮೊದಲ ದಿನದ ಭಾರೀ ಕಲೆಕ್ಷನ್ ನಂತರ ಇದೀಗ ಎಲ್ಲರ ಗಮನ ವೀಕೆಂಡ್ ಬಾಕ್ಸ್ ಆಫೀಸ್ ಮೇಲೆ ಇದೆ. ಟ್ರೇಡ್ ತಜ್ಞರ ಪ್ರಕಾರ ಶನಿವಾರ ಮತ್ತು ಭಾನುವಾರ ಇನ್ನಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಸಾಧ್ಯತೆ ಇದೆ.

ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ‘ಧುರಂಧರ್ 2’ ಇನ್ನೂ ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ.